ಪ್ರವಾಸಿ ಪಥ ಪರಿಚಯ

ನಮಸ್ಕಾರ ಪಯಣಿಗರೇ,

ಒಂದು ಹೊಸ ಜಾಗಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಬೇರೆ ರೀತಿಯ ಸ್ಥಳ, ಕಟ್ಟಡ, ಜನರು, ಸಂಸ್ಕೃತಿ, ಆಹಾರ ಇತ್ಯಾದಿ ನಮಗೆ ಚೇತೋಹಾರಿ ಅನುಭವ ಕೊಡುತ್ತದೆ. ಅಲ್ವಾ? ಅಂತಹ ಜಾಗಗಳ ಬಗ್ಗೆ, ಆಹಾರದ ಬಗ್ಗೆ, ಸಂಸ್ಕೃತಿ ಬಗ್ಗೆ ಮಾಹಿತಿ ನೀಡುವ ಬ್ಲಾಗ್ ಹೆಸರು ಪ್ರವಾಸಿ ಪಥ.

ದೇಶ, ವಿದೇಶ, ಪ್ರದೇಶಗಳನ್ನು ಸುತ್ತುವ ಅನುಭವಗಳ ಸರಮಾಲೆಯೇ ಪ್ರವಾಸಿ ಪಥದ ಮೂಲ ಸಾರ.

ವಿದೇಶದ ನೆಲದಿಂದ ಹಿಡಿದು ಭಾರತದ ಬಣ್ಣ ಬಣ್ಣದ ಬೀದಿಯವರೆಗೆ ಮತ್ತು ಕರ್ನಾಟಕದಲ್ಲಿ ಅವಿತ ನಿಗೂಢ ಪ್ರದೇಶಗಳು, ಹೀಗೆ ಈ ಪ್ರವಾಸಿ ಪಥ ಟ್ರಾವೆಲ್ ಬ್ಲಾಗ್ ಹಲವು ಪ್ರವಾಸ ಕಥೆಗಳ ಸಂಗಮ.

ಅಪರಿಮಿತ ಕಾಳಜಿಯಿಂದ ಆಯ್ದ ಪ್ರತಿ ಲೇಖನ ನಿಮ್ಮನ್ನು ಪ್ರಪಂಚಾದ್ಯಂತದ ಹಲವು ಕೌತುಕ ಜಾಗಗಳ ಪರಿಚಯ ಮಾಡಿಸಲಿದೆ. ಹಲವು ಹೊಸ ಉಪಯುಕ್ತ ವಿಷಯಗಳನ್ನು ತಿಳಿಸಲಿದೆ.

ಒಂದು ಪ್ರವಾಸಿ ಸ್ಥಳ ತಲುಪುವ ದಾರಿ, ಅಲ್ಲಿನ ಇತಿಹಾಸ, ಪುರಾಣ, ನಂಬಿಕೆಗಳು, ಆಹಾರ ಪದ್ಧತಿ, ನೋಡ ಬೇಕಾದ ಜಾಗ, ಮಾಡಬೇಕಾದ ಸಾಹಸ, ಸೂಕ್ತ ಸಮಯ ಹೀಗೆ ಹಲವು ಮಾಹಿತಿ ನೀಡಲು ಇಲ್ಲಿನ ಪುಟಗಳು ಪ್ರಯತ್ನಿಸುತ್ತವೆ.

ಮುಂದಿನ ವಿದೇಶಿ ಪ್ರಯಾಣಕ್ಕೆ ಪ್ರಯಾಣದ ಟಿಪ್ಸ್ ನೀವು ಹುಡುಕುತ್ತಿರಲಿ, ಅಥವಾ ಭಾರತದ ಪ್ರವಾಸಿ ಸ್ಥಳದ ಬಗ್ಗೆ ಕುತೂಹಲ ಇರಲಿ ಅಥವಾ ಕರ್ನಾಟಕದ ತಾಣಗಳು ಹೀಗೆ ಈ ಪ್ರವಾಸಿ ಪಥ ತಾಣ ಜಗತ್ತಿನ ಜಾಗಗಳಿಗೆ ಒಂದು ಬೆಳಕಿಂಡಿ ಆಗುವ ಕನಸನ್ನು ಹೊಂದಿದೆ.

ನಿಮ್ಮ ಸಲಹೆ ಗಳಿಗೆ ಯಾವಾಗಲೂ ಸ್ವಾಗತ. ಪ್ರತಿ ಪುಟ ಕಮೆಂಟ್ ಸೌಲಭ್ಯ ಹೊಂದಿದ್ದು ನಿಮ್ಮ ಅನಿಸಿಕೆ ಮುಕ್ತವಾಗಿ ತಿಳಿಸಿ.

ಬನ್ನಿ ಈ ನಮ್ಮ ಪಯಣಕ್ಕೆ ಜೊತೆಯಾಗಿ, ಖುಷಿಯಲ್ಲಿ ಭಾಗಿಯಾಗಿ.

ನಿಮ್ಮ ಪಯಣ ಸಂತೋಷಕರ ಆಗಿರಲಿ!

ನೆನಪಿಡಿ ಪ್ರವಾಸಿ ಪಥ ಬ್ಲಾಗ್ ಮಸ್ತಕಮಣಿ.ಕಾಂ ವೆಬ್ ತಾಣದ ಮಣಿಗಳಲ್ಲಿ ಒಂದಾಗಿದೆ. ಉಳಿದ ಮಣಿಗಳನ್ನು ನೋಡಲು ಮಸ್ತಕಮಣಿ.ಕಾಂ ತಪ್ಪದೇ ಭೇಟಿ ನೀಡಿ.

--ಪ್ರವಾಸಿ ಪಥ
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

blogger

ತಪ್ಪದೇ ಓದಿ...

ವಿದೇಶ,ಬೆಂಗಳೂರು
©ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ. ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ಇದು ಮಸ್ತಕಮಣಿ.ಕಾಂ ಕೊಡುಗೆ